Posts
41k1 kannadammana harake
- Get link
- X
- Other Apps
4th std 1st language kannada 1st poem kannadammana harake ಕನ್ನಡಕೆ ಹೋರಾಡು ಕನ್ನಡದ ಕಂದ ಕನ್ನಡವ ಕಾಪಾಡು ನನ್ನ ಆನಂದ ಜೋಗುಳದ ಹರಕೆಯಿದು ಮರೆಯದಿರು, ಚಿನ್ನಾ ಮರೆತೆಯಾದರೆ ಅಯ್ಯೊ ಮರೆತಂತೆ ನನ್ನ ಮೊಲೆಯ ಹಾಲೆಂತಂತೆ ಸವಿಜೇನು ಬಾಯ್ಗೆ ತಾಯಿಯಪ್ಪುಗೆಯಂತೆ ಬಲುಸೊಗಸು ಮೆಯ್ಗೆ ಗುರುವಿನೊಳ್ನುಡಿಯಂತೆ ಶ್ರೇಯಸ್ಸು ಬಾಳ್ಗೆ ತಾಯ್ನುಡಿಗೆ ದುಡಿದು ಮಡಿ ಇಹಪರಗಳೇಳ್ಗೆ ದಮ್ಮಯ್ಯ ಕಂದಯ್ಯ ಬೇಡುವೆನು ನಿನ್ನ ಕನ್ನಡಮ್ಮನ ಹರಕೆ ಮರೆಯದಿರು, ಚಿನ್ನಾ ಮರೆತೆಯಾದರೆ ಅಯ್ಯೊ ಮರೆತಂತೆ ನನ್ನ ಹೋರಾಡು ಕನ್ನಡಕೆ ಕಲಿಯಾಗಿ, ರನ್ನಾ
52k3 saaruthide srushti
- Get link
- X
- Other Apps
5th std 2nd language kannada 3rd poem saaruthide srushti ಹಣ್ಣಿನಲಿ ಬೆಣ್ಣೆಯಲಿ ಕೆನೆಮೊಸರು ಹಾಲಿನಲಿ ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ ಎಳೆನೀರು ಹೊಳೆನೀರು ಹಾಲ್ದೆನೆಯ ಕಾಳಿನಲಿ ಸಾರುತಿದೆ ಸೃಷ್ಟಿಯಿದು ಸವಿಯಾಗಿ ನಿಂದು ಸವಿಯಾಗು ಸವಿಯಾಗು ಸವಿಯಾಗು! ಎಂದು ತಾರೆಯಲಿ ಚಂದ್ರನಲಿ ಸೂರ್ಯನಲಿ ರನ್ನದಲಿ ಕಂಚಿನಲಿ ಮಿಂಚಿನಲಿ ಮುತ್ತಿನಲಿ ಚಿನ್ನದಲಿ ಜ್ಯೋತಿಯಲಿ ನಯನದಲಿ ಉಷೆಯ ಹೊಂಬಣ್ಣದಲಿ ಸಾರುತಿದೆ ಸೃಷ್ಟಿಯಿದು ಛವಿಯಾಗಿ ನಿಂದು ಛವಿಯಾಗು ಛವಿಯಾಗು ಛವಿಯಾಗು! ಎಂದು ಶಬ್ಧದಲಿ ಸವಿಯಾಗಿ ಅರ್ಥದಲಿ ಬೆಳಕಾಗಿ ಬಾಳ ಭವ್ಯತೆಗಿಲ್ಲಿ ಬೆಳಕು ಸವಿ ಸಾಕಾಗಿ ಬಾಳುವೆಯ ಸವಿ ಬೆಳಕ ಬರೆಯುವವ ಬೇಕಾಗಿ ಸಾರುತಿದೆ ಸೃಷ್ಟಿ ಸವಿ ಛವಿಯಾಗಿ ನಿಂದು ಕವಿಯಾಗು ಕವಿಯಾಗು ಕವಿಯಾಗು! ಎಂದು