41k1 kannadammana harake
4th std
1st language kannada
1st poem
kannadammana harake
1st language kannada
1st poem
kannadammana harake
ಕನ್ನಡಕೆ ಹೋರಾಡು
ಕನ್ನಡದ ಕಂದ
ಕನ್ನಡವ ಕಾಪಾಡು
ನನ್ನ ಆನಂದ
ಜೋಗುಳದ ಹರಕೆಯಿದು
ಮರೆಯದಿರು, ಚಿನ್ನಾ
ಮರೆತೆಯಾದರೆ ಅಯ್ಯೊ
ಮರೆತಂತೆ ನನ್ನ
ಮೊಲೆಯ ಹಾಲೆಂತಂತೆ
ಸವಿಜೇನು ಬಾಯ್ಗೆ
ತಾಯಿಯಪ್ಪುಗೆಯಂತೆ
ಬಲುಸೊಗಸು ಮೆಯ್ಗೆ
ಗುರುವಿನೊಳ್ನುಡಿಯಂತೆ
ಶ್ರೇಯಸ್ಸು ಬಾಳ್ಗೆ
ತಾಯ್ನುಡಿಗೆ ದುಡಿದು ಮಡಿ
ಇಹಪರಗಳೇಳ್ಗೆ
ದಮ್ಮಯ್ಯ ಕಂದಯ್ಯ
ಬೇಡುವೆನು ನಿನ್ನ
ಕನ್ನಡಮ್ಮನ ಹರಕೆ
ಮರೆಯದಿರು, ಚಿನ್ನಾ
ಮರೆತೆಯಾದರೆ ಅಯ್ಯೊ
ಮರೆತಂತೆ ನನ್ನ
ಹೋರಾಡು ಕನ್ನಡಕೆ
ಕಲಿಯಾಗಿ, ರನ್ನಾ
ಕನ್ನಡದ ಕಂದ
ಕನ್ನಡವ ಕಾಪಾಡು
ನನ್ನ ಆನಂದ
ಜೋಗುಳದ ಹರಕೆಯಿದು
ಮರೆಯದಿರು, ಚಿನ್ನಾ
ಮರೆತೆಯಾದರೆ ಅಯ್ಯೊ
ಮರೆತಂತೆ ನನ್ನ
ಮೊಲೆಯ ಹಾಲೆಂತಂತೆ
ಸವಿಜೇನು ಬಾಯ್ಗೆ
ತಾಯಿಯಪ್ಪುಗೆಯಂತೆ
ಬಲುಸೊಗಸು ಮೆಯ್ಗೆ
ಗುರುವಿನೊಳ್ನುಡಿಯಂತೆ
ಶ್ರೇಯಸ್ಸು ಬಾಳ್ಗೆ
ತಾಯ್ನುಡಿಗೆ ದುಡಿದು ಮಡಿ
ಇಹಪರಗಳೇಳ್ಗೆ
ದಮ್ಮಯ್ಯ ಕಂದಯ್ಯ
ಬೇಡುವೆನು ನಿನ್ನ
ಕನ್ನಡಮ್ಮನ ಹರಕೆ
ಮರೆಯದಿರು, ಚಿನ್ನಾ
ಮರೆತೆಯಾದರೆ ಅಯ್ಯೊ
ಮರೆತಂತೆ ನನ್ನ
ಹೋರಾಡು ಕನ್ನಡಕೆ
ಕಲಿಯಾಗಿ, ರನ್ನಾ
Comments
Post a Comment