hagalu veshagaararu
8th std
3rd language kannada
3rd poem
hagalu veshagaararu
ಹಗಲು ವೇಷಗಾರರಿವರು
ಮೋಸಗಾರರಲ್ಲ
ಹಗಲ ಹೆಗಲಿಗೆ ಹೆಗಲು ಕೊಟ್ಟವರು
ಮೂಡಣದಿಂದ ಮೂಡಿಬಂದ ಸೂರ್ಯನ
ತೇಜಸ್ವಿ ಮಂಡಲದ ವಾರಸುದಾರರು
ಬದಲಿಸಿದರೂ ಬಣ್ಣ ಗೋಸುಂಬೆಗಳಲ್ಲವಣ್ಣ
ಬಹುರೂಪಿ ಬದುಕಿನ ಪಾತ್ರಧಾರಿಗಳು
ಓದಲಿಲ್ಲ ರಾಮಾಯಣ; ಓದಿದ್ದು ಗ್ರಾಮಾಯಣ
ಪಠಿಸಲಿಲ್ಲ ಭಾಗವತ - ವ್ಯಾಸರ ಮಹಾಭಾರತ
ನಿರ್ದೇಶಿಸಲು ಯಾರಿಲ್ಲ - ತಮಗೆ ತಾವೇ ದಿಗ್ದರ್ಶಕರು
ಕುರಿತೋದದೆ ನಾಟಕ ಪ್ರಯೋಗ ಪರಿಣತರು
ಗಿರಿಜನ ಸಂಸ್ಕೃತಿಯ ವಾಲ್ಮೀಕಿ ಭರತರು
ಕಾಲ ಚಕ್ರವನ್ನು ಕಾಲಲ್ಲಿ ಮೆಟ್ಟು
ನಾಡು ನಾಡು ಅಲೆದು ನಾಡಾಡಿಗಳಾದರು
ಕಣ್ಣೀರು ಹರಿಸಿ, ಮಣ್ಣನ್ನ ಕಲಿಸಿ
ಮಣ್ಣು ಬಣ್ಣ ಮಾಡಿ ಒಡಲಿಗೊರಸಿದರು
ಜೀವನದ ತುಂಬ ಬರೀ ಪಾತ್ರಧಾರಿಗಳಾಗಿ
ಬಣ್ಣದ ವೇಷ ತೊಟ್ಟು ಮಹಲುಗಳ ಮುಂದೆ
ಧಣಿಗಳ ರಂಜಿಸಲೆಂದು ಕುಣಿದಾಡಿದರು
ಅರ್ಥದೋಚಿ ಜೀವನ ವ್ಯರ್ಥಗೈದವರ ಮುಂದೆ
ಕೈಯೊಡ್ಡಿ ಬದುಕು ಜೋಳಿಗೆ ಮಾಡಿದರು
ಕದತಟ್ಟಿ ಎದೆ ತಟ್ಟಿ ನೋವಿನ ನೂರೆಂಟು
ಅಂಚೆ ನಿತ್ಯ ಬಟ್ವಾಡ ಮಾಡಿದರು
ಬದುಕೆಲ್ಲ ಬಯಲಾಟ - ಅಂತ್ಯವದು ದುರಂತ
ಮೂರು ಗಂಟೆಗೆ ಮುಗಿಯುವ ನಾಟಕವಲ್ಲವಿದು
ಏಸೋ ಜನುಮಗಳ ರಂಗ ಪ್ರಯೋಗವಾಗಬೇಕು
ಬದಲಾವಣೆಗೆ ದಿನರಾತ್ರಿ ಪರಿತಪಿಸಬೇಕು
Comments
Post a Comment