goodininda baaninedege


5th std
2nd language kannada
2nd poem
goodininda baaninedege


ಗೂಡಿನಿಂದ ಬಾನಿನೆಡೆಗೆ
ಹಕ್ಕಿ ಹಾರಿತು
ರೆಕ್ಕೆ ಬಡಿದು ಬಡಿದು ಹಕ್ಕಿ
ಮೇಲಕೇರಿತು

ಮೇಲ ಮೇಲಕೇರಿ ಹಕ್ಕಿ
ಕೆಳಗೆ ನೋಡಿತು
ಹಳ್ಳಕೊಳ್ಳ ಹಸಿರು ಬೆಟ್ಟ
ಕಂಡು ಹಾಡಿತು

ಏನು ಅಂದ ಏನು ಚಂದ
ಗೂಡಿನಾಚೆಗೆ
ಗೂಡು ತೊರೆದು ಹಾರಬೇಕು
ನಿತ್ಯ ಬಾನಿಗೆ

ಸಗ್ಗ ಸುಖವು ಕಂಡ ಹಾಗೆ
ಹಿಗ್ಗಿ ಆಡಿತು
ಆಡಿ ಆಡಿ ಹಕ್ಕಿ ಮರಳಿ
ಗೂಡು ಸೇರಿತು

ಅಮ್ಮ ಮರಳಿ ಮನೆಗೆ ಬರಲು
ಹಿಗ್ಗಿ ಹೇಳಿತು
ಆಡಿ ಬಂದೆ ಗೂಡಿನಾಚೆ
ಎಂದು ನಕ್ಕಿತು

ತೀರಲಿಲ್ಲ ಕಂದ ನೀನು
ನೋಡು ತಾಣವು
ಬೆಳೆದ ಮೇಲೆ ತಿಳಿವುದಾಗಾ
ಜಗದ ಲೀಲೆಯು

- ಪ . ಗು . ಸಿದ್ದಾಪುರ

Comments

Post a Comment