Baa Bega Surya

6th std
2nd language kannada
1st poem
Baa Bega Surya

ಅಕ್ಕಾ  ಅಣ್ಣ ಮಲಗಿಹರಿನ್ನೂ 
ಸೂರ್ಯನು ಕೂಡ ಬಂದಿಲ್ಲ 
ನಿನ್ನೆಯ ದಿನದಿ ಆಟದಿ ದಣಿದು 
ಅವನು ಇನ್ನೂ ಎದ್ದಿಲ್ಲ 

         ಬಾರೋ ಸೂರ್ಯ ಬೇಗನೆ ಬಾರೋ 
         ಚಳಿಯನು ಕಳೆದು ಬಿಸಿಲನು ತಾರೋ 
         ಗುಬ್ಬಿ ಹಕ್ಕಿ ಚಿಲಿಪಿಲಿಗುಟ್ಟಿ 
         ನಿನಗೆ ಸ್ವಾಗತ ಹಾಡುತಿದೆ 

ನಿನ್ನಯ ಸ್ಪರ್ಧಿ ಅಪ್ಪನು ಆಗಲೆ 
ಹೊಲಕೆ ಗಳೆಯನು ಹೊಡೆದಿಹನು 
ಉತ್ತಿಬಿತ್ತಿ ಪೈರನು ಬೆಳೆದು 
ಜಗಕೆ ಅನ್ನವ ನೀಡುವನು 

         ಸೂರ್ಯನೆ  ನೀನು ಬಂದರೆ ಬೇಗ 
         ಕಟ್ಟಿದ ಕುರುವಿಗೂ ಮೊಲೆ ಹಾಲುಂಟು 
         ಅಮ್ಮನು ಕರೆದು ಎಡೆಯನು ಹಿಡಿದು 
         ನನಗೂ ಹಾಲನು ಕುಡಿಸುವುದುಂಟು 

ಬಾರೋ ಸೂರ್ಯ ಬೇಗನೆ ಬಾರೋ 
ಜಗದ ಕಣ್ಣಾಗಿ ಬೆಳಕನು ತಾರೋ 
ಬರದಿರೆ ನೀನು ಉಳಿಯುವುದೇನು?
ಜೀವರಾಶಿಯ ದೈವವೇ ನೀನು 

Comments